ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದೇ ಹೆಸರಿನ ೭ ಸ್ಥಳಗಳಿವೆ, ಅವುಗಳಲ್ಲಿ ಮ್ಯಾಸಚೂಸೆಟ್ಸ್ ಪ್ರಾಂತ್ಯದ ಒಂದು ಪಟ್ಟಣ. ಬಾಸ್ಟನ್ ನಗರದ ವಾಯವ್ಯಕ್ಕೆ ಸು. ೧೩ ಕಿಮೀ ದೂರದಲ್ಲಿದೆ. ಬಾಸ್ಟನ್ ಹಾಗೂ ಮೇನ್ ರೈಲು ಮಾರ್ಗ ಇದಕ್ಕೆ ಸಂಪರ್ಕವನ್ನು ಕಲ್ಪಿಸುವುದು. ಇದರ ಒಟ್ಟು ವಿಸ್ತೀರ್ಣ ೧೪.೨ ಚಕಿಮೀ. ಜನಸಂಖ್ಯೆ ೪೨೩೮೯ (೨೦೦೧). ಜನಸಂಖ್ಯೆ: ೧೭೦೯೩೬ (೨೦೦೪) ಒಂದು ಸುಂದರವಾದ ಸ್ಪೈ ಎಂಬ ಕೊಳವಿದೆ. ತೋಟಗಾರಿಕೆ ಮುಖ್ಯ ಕಸಬು. ಪಿಯಾನೊ, ದಿನಬಳಕೆ ಯಂತ್ರದ ಸಾಮಾನುಗಳು ಹಾಗೂ ಚಿತ್ರಪಟ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ೧೮೦೭ರಲ್ಲಿ ವೆಸ್ಟ್‌ಕೇಂಬ್ರಿಡ್ಜ್ ಎಂಬ ಹೆಸರಿನಿಂದ ಆರ್ಲಿಂಗ್ಟನ್ ಪಟ್ಟಣ ಮಾರ್ಪಾಡಾಯಿತು. ಆದರೆ ಅದೇ ವರ್ಷ ಆರ್ಲಿಂಗ್ಟನ್ ಎಂಬ ಹೆಸರನ್ನೇ ಮತ್ತೆ ಸ್ವೀಕರಿಸಲಾಯಿತು.

ಆರ್ಲಿಂಗ್ಟನ್ ವರ್ಜೀನಿಯದಲ್ಲಿ ಆರ್ಲಿಂಗ್‍ಟನ್ ಎಂಬ ಒಂದು (ಐತಿಹಾಸಿಕ ಗೃಹ ಪೋಟೋಮಾಕ್ ನದಿಯ ಪಕ್ಕದಲ್ಲಿದೆ ವಾಷಿಂಗ್ಟನ್ ಡಿ.ಸಿ.ಗೆ ಎದುರಿನಲ್ಲಿ ಇದೆ). ಒಮ್ಮೆ ಈ ಗೃಹ ಜಾರ್ಜ್ ವಾಷಿಂಗ್ಟನ್ನ ಸ್ವತ್ತಾಗಿತ್ತು. ಅನಂತರ ಆತನ ಮೊಮ್ಮಗನ ದತ್ತು ಸ್ವತ್ತಾಯಿತು. ಈತನ ಮಗಳನ್ನು ಮದುವೆಯಾದ ರಾಬರ್ಟ್ ಈಲಿಗೆ ೧೮೩೧ರಲ್ಲಿ ದೊರಕಿತು. ಕೆಲವು ಕಾಲಾನಂತರ ಆರ್ಲಿಂಗ್ಟನ್ ರಾಷ್ಟ್ರದ ಸಮಾಧಿಸ್ಥಳವಾಗಿ ಅನೇಕ ಅಗ್ರಗಣ್ಯ ವ್ಯಕ್ತಿಗಳ ಹಾಗೂ ಸೈನಿಕರ ಬೀಡಾಯಿತು. ವಸಾಹತು ಕಲೆಗೆ ಈ ಕಟ್ಟಡ ಇಂದಿಗೂ ಒಂದು ಮಾದರಿ. ಆರ್ಲಿಂಗ್ಟನ್ ಗೃಹದ ಸುತ್ತಲಿನ ರಾಷ್ಟ್ರೀಯ ಸಮಾಧಿ ಪ್ರದೇಶ ೪೦೦ ಎಕರೆಗಳಿಗಿಂತಲೂ ಹೆಚ್ಚು. ಇದೊಂದು ರಮಣೀಯ ಪ್ರದೇಶ.  

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ